ತಪಸ್ ಪತ್ರ   ತಪಸ್ ಚಿಗುರೆಲೆ   ತಪಸ್ ಅರ್ಜಿ ನಮೂನೆ   ಮಾದರಿ ಪ್ರಶ್ನೆಪತ್ರಿಕೆಗಳು

ಉದ್ದೇಶಗಳು

ತಪಸ್ ಪ್ರಕಲ್ಪವು ರಾಷ್ಟ್ರೋತ್ಥಾನ ಪರಿಷತ್ ಮತ್ತು ಬೇಸ್ ನ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕರ್ನಾಟಕದ ಪ್ರಭಾವೀ ತರಬೇತಿ ಕಾರ್ಯಕ್ರಮವಾಗಿದೆ.

ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪದವಿ-ಪೂರ್ವ ಶಿಕ್ಷಣದೊಂದಿಗೆ ಐಐಟಿ ಪ್ರವೇಶಕ್ಕಾಗಿ ಅವರನ್ನು ತಯಾರಿಗೊಳಿಸುವ ಗುರಿಯನ್ನು ಹೊಂದಿದೆ. ಕರ್ನಾಟಕದಲ್ಲಿನ ಸುಮಾರು ೧೨,೦೦೦ ಕ್ಕಿಂತಲೂ ಹೆಚ್ಚಿನ ಪ್ರೌಢಶಾಲೆಗಳಿಂದ ವಿದ್ಯಾರ್ಥಿಗಳನ್ನು ಆಮಂತ್ರಿಸಿ, ಬಹು-ವಿಧದ ಕಠಿಣ ಪರೀಕ್ಷಾ ಪ್ರಕ್ರಿಯೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಪಿ.ಯು.ಶಿಕ್ಷಣ, ಐಐಟಿ ಪ್ರವೇಶ ಪರೀಕ್ಷೆಗೆ ತರಬೇತಿ, ಹಾಸ್ಟೆಲ್, ಆಹಾರ, ಪುಸ್ತಕಗಳು, ಸಮವಸ್ತ್ರ, ಇತ್ಯಾದಿ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.

ಮುಖ್ಯಾಂಶಗಳು

ತಪಸ್

ತಪಸ್ – ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಐಐಟಿ ಪ್ರವೇಶಕ್ಕೆ ಸಿದ್ಧತೆಗೊಳಿಸುತ್ತದೆ

ತಲುಪದಿರುವಲ್ಲಿಗೆ ತಲುಪುವುದು

ಐಐಟಿ ಕನಸು ಹೊತ್ತ ಕರ್ನಾಟಕದ ಗ್ರಾಮೀಣ ಮತ್ತು ದೂರ ಪ್ರದೇಶದ ಬಡ ವಿದ್ಯಾರ್ಥಿಗಳು ಸದಾವಕಾಶವನ್ನು ಪಡೆಯುತ್ತಾರೆ.

ಶೈಕ್ಷಣಿಕ

ನುರಿತ ಬೇಸ್ ಪರಿಣತರಿಂದ ಪಿಯು ಮತ್ತು ಐಐಟಿ-ಜೆಇಇ ಪ್ರವೇಶ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ.

ಅತ್ಯುತ್ತಮ ಸೌಲಭ್ಯಗಳು

ತರಗತಿ ಕೊಠಡಿಗಳು, ಕಂಪ್ಯೂಟರ್ ಮತ್ತು ಸೈನ್ಸ್ ಪ್ರಯೋಗಾಲಯಗಳು, ಗ್ರಂಥಾಲಯ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಒಳಗೊಂಡಿರುವ ಆಯ್ದ ವಿದ್ಯಾರ್ಥಿಗಳಿಗೆ ಅತ್ಯುತ್ತಮ-ವರ್ಗ ಮೂಲಸೌಕರ್ಯವನ್ನು ಒದಗಿಸಲಾಗುತ್ತದೆ.

ಮಾರ್ಗದರ್ಶನ

ಶ್ರೇಷ್ಠ ಪ್ರಾಧ್ಯಾಪಕರು ಮತ್ತು ಮೀಸಲಾದ ಮಾರ್ಗದರ್ಶಕರು ಪ್ರತಿ ಹಂತದಲ್ಲೂ ವಿದ್ಯಾರ್ಥಿಗಳನ್ನು ನಿರ್ದೇಶಿಸುತ್ತಾರೆ.

ಸಂಪೂರ್ಣ ಆರ್ಥಿಕ ನೆರವು

ವಿದ್ಯಾರ್ಥಿಗಳ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಾಗುವುದು ಮತ್ತು ಇದಕ್ಕೆ
ಯಾವುದೇ ಹಣವನ್ನು ಪಾವತಿಸಬೇಕಾಗಿರುವುದಿಲ್ಲ.

ಬಾಲಕರಿಗೆ ಮಾತ್ರ

ತಪಸ್ ಕಾರ್ಯಕ್ರಮವು ಬಾಲಕರಿಗೆ ಮಾತ್ರ.

ಎರಡು ವರ್ಷದ ವಸತಿ ಕಾರ್ಯಕ್ರಮ

ಐಐಟಿ ಕೋಚಿಂಗ್ ನಲ್ಲಿ ಕರ್ನಾಟಕದ ಪ್ರಮುಖ ತಜ್ಞರಾದ ಬೇಸ್ ನಿಂದ ಉಚಿತ ಎರಡು ವರ್ಷದ ಪಿಯು ಶಿಕ್ಷಣ ಮತ್ತು ಕಠಿಣವಾದ ಐಐಟಿ ಪ್ರವೇಶ ತರಬೇತಿ ನೀಡಲಾಗುತ್ತದೆ.

ಪ್ರತಿಭಾವಂತ ವಿದ್ಯಾರ್ಥಿಗಳು

35-40 ಶ್ರೇಷ್ಠ ವಿದ್ಯಾರ್ಥಿಗಳ ಬ್ಯಾಚ್ - ಕರ್ನಾಟಕದ ಪ್ರೌಢಶಾಲೆಗಳಿಂದ ಪ್ರತಿವರ್ಷ ಆಯ್ಕೆ.

ಅರ್ಹತೆ

ಕೆಳಗೆ ನೀಡಲಾದ ಎಲ್ಲಾ ಮಾನದಂಡಗಳನ್ನು ಪೂರೈಸುವ ವಿದ್ಯಾರ್ಥಿಗಳು (ಬಾಲಕರು ಮಾತ್ರ) ತಪಸ್ ಕಾರ್ಯಕ್ರಮಕ್ಕಾಗಿ ಅರ್ಜಿ ಸಲ್ಲಿಸಬಹುದು:

  • ೧೦ನೇ ತರಗತಿಯಲ್ಲಿ ಓದುತ್ತಿರಬೇಕು
  • ೯ನೇ ತರಗತಿಯಲ್ಲಿ ಕನಿಷ್ಟ ೮೦% ಅಂಕಗಳನ್ನು ಪಡೆದಿರಬೇಕು
  • ಪೋಷಕರ ಆದಾಯವು ವಾರ್ಷಿಕ ರೂ.೧,೫೦,೦೦೦ (ಒಂದು ಲಕ್ಷ ಐವತ್ತು ಸಾವಿರ) ಮೀರಿರಬಾರದು
  • ಅಧ್ಯಯನ ಮಾಡಲು ಬೆಂಗಳೂರಿಗೆ ತೆರಳಲು ಸಿದ್ಧರಿರಬೇಕು

ಆಯ್ಕೆ ಪ್ರಕ್ರಿಯೆ

ತಪಸ್ ಮೂರು ಹಂತಗಳ ಆಯ್ಕೆ ಪ್ರಕ್ರಿಯೆಯನ್ನು ಹೊಂದಿದೆ:

  • ಪ್ರತಿ ವರ್ಷ ೨೫ ನೇ ಡಿಸೆಂಬರ್ ನಲ್ಲಿ ಬರೆಯುವ ಪ್ರವೇಶ ಪರೀಕ್ಷೆ
  • ಮನೆ ಭೇಟಿ ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂವಹನ
  • ಬೆಂಗಳೂರಿನಲ್ಲಿ ನಡೆಯುವ ಅಂತಿಮ ಆಯ್ಕೆ ಶಿಬಿರದಲ್ಲಿ ಆಯ್ಕೆ ಪ್ರಕ್ರಿಯೆ

ಪ್ರಮುಖ ದಿನಾಂಕಗಳು:

  • ತಪಸ್ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ ೧೫
  • ಪ್ರವೇಶ ಪರೀಕ್ಷೆ: ಪ್ರತಿ ವರ್ಷ ೨೫ನೇ ಡಿಸೆಂಬರ್. ಬೆಳಿಗ್ಗೆ ೧೦.೦೦ ರಿಂದ ಮಧ್ಯಾಹ್ನ ೧.೦೦ ರವರೆಗೆ
  • ೧೦ನೇ ತರಗತಿ ಪರೀಕ್ಷೆ ಮುಗಿದ ನಂತರ ಬೆಂಗಳೂರಿನಲ್ಲಿ ಅಂತಿಮ ಆಯ್ಕೆ ಶಿಬಿರ

ಸೌಲಭ್ಯಗಳು

ತಪಸ್ ಕಾರ್ಯಕ್ರಮದ ಉದ್ದೇಶವು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಶ್ರೇಷ್ಠತೆ ನೀಡುವುದು ಮತ್ತು ಐಐಟಿಗಳಲ್ಲಿ ಪ್ರವೇಶ ಪಡೆಯಲು ಉತ್ತಮ ಶೈಕ್ಷಣಿಕ ವೇದಿಕೆಯನ್ನು ಒದಗಿಸುವುದು. ತಪಸ್ ಪ್ರಕಲ್ಪವು ವಿದ್ಯಾರ್ಥಿಗಳಿಗೆ ೨೪ ಗಂಟೆಗಳೂ ಸಹಾಯ ಒದಗಿಸುತ್ತದೆ ಮತ್ತು ಇದು ವಿದಾಭ್ಯಾಸ ಮಾಡಲು ಇರುವ ಎಲ್ಲಾ ತೊಂದರೆಗಳನ್ನು ನಿವಾರಿಸಲು ಸಹಕಾರಿಯಾಗಿದೆ.

ವಿದ್ಯಾರ್ಥಿಗಳಿಂದ ನಿರೀಕ್ಷೆ

ಪ್ರತಿ ವಿದ್ಯಾರ್ಥಿಯು ತಪಸ್ ಕಾರ್ಯಕ್ರಮದಲ್ಲಿ ಕಟ್ಟುನಿಟ್ಟಾಗಿ ದಿನಚರಿಯನ್ನು ಅನುಸರಿಸಬೇಕು ಹಾಗೂ ಐಐಟಿ ಪ್ರವೇಶ ಪರೀಕ್ಷೆಗೆ ಸಂಪೂರ್ಣ ಗಮನ ಹರಿಸಿ ಅಧ್ಯಯನ ನಡೆಸಬೇಕು.

ಸಂಪರ್ಕಿಸಿ

ಸಂಯೋಜಕರು
ರಾಷ್ಟ್ರೋತ್ಥಾನ ಪರಿಷತ್, ತಪಸ್ ವಿಭಾಗ
ಕೇಶವ ಶಿಲ್ಪ, ಕೆಂಪೇಗೌಡನಗರ,
ಉಮಾ ಟಾಕೀಸ್ ಹತ್ತಿರ
ಬೆಂಗಳೂರು - ೫೬೦೦೧೯

ದೂರವಾಣಿ: ೯೪೪೮೨೮೪೬೧೫, ೯೪೮೧೨೦೧೧೪೪

ಶೀಘ್ರ ಸಂಪರ್ಕ

ಸಂಬಂಧಿತ ಕೊಂಡಿಗಳು

ನಮ್ಮ ಪಾಲುದಾರರು

rashtrotthana
base
error: Content is protected !!