ತಪಸ್ ಪತ್ರ   ತಪಸ್ ಚಿಗುರೆಲೆ   ತಪಸ್ ಅರ್ಜಿ ನಮೂನೆ   ಮಾದರಿ ಪ್ರಶ್ನೆಪತ್ರಿಕೆಗಳು

೨೦೧೨ ರಲ್ಲಿ ಪ್ರಾರಂಭವಾದ ತಪಸ್ ಪ್ರಕಲ್ಪದ ಮೂಲಕ ಕರ್ನಾಟಕದ ಗ್ರಾಮಾಂತರದ ಆರ್ಥಿಕವಾಗಿ ಹಿಂದುಳಿದ ಪರಿವಾರಗಳ ಮಕ್ಕಳು ಪ್ರತಿಷ್ಠಿತ ಐಐಟಿ ಹಾಗೂ ಎನ್.ಐ.ಟಿ. ಹಾಗೂ ಪ್ರತಿಷ್ಠಿತ ಇಂಜಿನಿಯರ್ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ. ತಪಸ್ ನಲ್ಲಿ ಸಿಕ್ಕ ಮಾರ್ಗದರ್ಶನ , ಪರಿಸರ, ಕಠಿಣ ಪರಿಶ್ರಮ, ಅವರನ್ನು ಈ ಎತ್ತರಕ್ಕೆ ಕೊಂಡೊಯ್ಯಲು ಸಹಕಾರಿಯಾಗಿದೆ.

ಇದುವರೆಗೆ ಐಐಟಿ ಗಳಿಗೆ ಆಯ್ಕೆಯಾಗಿರುವ ಮಕ್ಕಳ ಕಿರುಪರಿಚಯ ಇಲ್ಲಿದೆ.ಇದುವರೆಗಿನ ಐದು ತಂಡಗಳಿಂದ ೧೬ ಮಕ್ಕಳು ಐಐಟಿಗಳಿಗೆ ೩೫ ಮಕ್ಕಳು ಎನ್.ಐ.ಟಿ ಗಳಿಗೆ ಪ್ರವೇಶ ಪಡೆದಿದ್ದಾರೆ.

ಪ್ರಶಾಂತ್ – ೨೦೧೨-೧೪ ನೇ ತಂಡ ವಿದ್ಯಾರ್ಥಿ

ಮೈಸೂರು ನಗರದ ಹಿಂದುಳಿದ ಪ್ರದೇಶದ ಬಡಕೂಲಿ ಕಾರ್ಮಿಕರ ಕುಟುಂಬದಲ್ಲಿ ಹುಟ್ಟಿದವ. ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲೆ ಶಿಕ್ಷಣವನ್ನು ಮುಗಿಸಿ ತಪಸ್ ಗೆ ಆಯ್ಕೆಯಾದ.ಎರಡು ವರ್ಷಗಳ ಕಠಿಣ ಪರಿಶ್ರಮದಿಂದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದು ಐಐಟಿ ಚೆನ್ನೈ ಗೆ ಆಯ್ಕೆಯಾದ.ಇದೀಗ ಇಂಟಿಗ್ರೇಟೆಡ್ ಎಂ.ಟೆಕ್ ನ ಅಂತಿಮ ವರ್ಷದಲ್ಲಿ ಓದುತ್ತಿದ್ದಾನೆ. ತಪಸ್ ಅವನ ಬದುಕಿನ ರೀತಿಯನ್ನೇ ಬದಲಾಯಿಸುತ್ತಿದೆ.

ರಾಹಿಲ್ ಎಂ ಕೋಟೆ- ೨೦೧೩-೧೫

ಮೂಲತಃ ಬೀದರನವನು.ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ.ಇವನ ತಾಯಿ ಟೈಲರ್ ವೃತ್ತಿಯಿಂದ ಮನೆಯ ಜವಾಬ್ದಾರಿ ಹೊತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಮುಗಿಸಿ ತಪಸ್ ಆಯ್ಕೆಯಾಗಿ ಬಂದನು. ತಪಸ್ ನ ಮಾರ್ಗದರ್ಶನದಲ್ಲಿ ಜೆಇಇ ಅಡ್ವಾನ್ಸ್ ನಲ್ಲಿ ರ‍್ಯಾಂಕ್ ಪಡೆದು. ಪ್ರಸ್ತುತ ಇಂದೋರ್ ಐಐಟಿಯಲ್ಲಿ ಅಂತಿಮ ವರ್ಷದ ಬಿ.ಟೆಕ್.ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

ರಾಹುಲ್ ಪೂಜಾರಿ ೨೦೧೪-೧೬

ಮೂಲತಃ ಉಡುಪಿಯವರಾದ ರಾಹುಲ್ ಪೂಜಾರಿಯವರ ತಂದೆ ಬೆಂಗಳೂರಿನಲ್ಲಿ ಟೈಲರ್ ವೃತ್ತಿಯಿಂದ ಜೀವನ ನಡೆಸುತ್ತಿದ್ದಾರೆ. ನವೋದಯ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿ ತಪಸ್ ಗೆ ಆಯ್ಕೆಯಾದ ರಾಹುಲ್ ಪೂಜಾರಿ. ಕಠಿಣ ಪರಿಶ್ರಮದಿಂದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದು ಗೌಹಾತಿ ಐಐಟಿಯನ್ನು ಆಯ್ಕೆ ಮಾಡಿಕೊಂಡು ೩ನೇ ವರ್ಷದ ಬಿ.ಟೆಕ್ ನಲ್ಲಿ ಓದುತ್ತಿದ್ದಾನೆ.

ಹರ್ಷಿತ್

ಬೆಂಗಳೂರಿನ ಹೊರವಲಯದಲ್ಲಿ ಎಲೆಕ್ಟ್ರಿಕಲ್ ಕೆಲಸದಲ್ಲಿ ದಿನಗೂಲಿ ನೌಕರನ ಮಗ.ನವೋದಯ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿ ತಪಸ್ ಗೆ ಆಯ್ಕೆಯಾದ ಹರ್ಷಿತ್ ಕಠಿಣ ಪರಿಶ್ರಮದಿಂದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದು ಗೌಹಾತಿ ಐಐಟಿಯನ್ನು ಆಯ್ಕೆ ಮಾಡಿಕೊಂಡು ೩ನೇ ವರ್ಷದ ಬಿ.ಟೆಕ್ ನಲ್ಲಿ ಓದುತ್ತಿದ್ದಾನೆ.

ಪವನ್ ಬೋರುಗುಂಡೆ

ಬೆಳಗಾವಿಯ ಗೋಕಾಕ್ ತಾಲೂಕಿನ ಒಂದು ಹಳ್ಳಿಯ ಬಡರೈತ ಕುಟುಂಬದಿಂದ ಬಂದವ. ಗೋಕಾಕ್ ನ ಮೊರಾರ್ಜಿ ಶಾಲೆ ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲೆ ಶಿಕ್ಷಣ ಮುಗಿಸಿ, ತಪಸ್ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಆಯ್ಕೆಯಾದ. ಕನ್ನಡ ಮಾಧ್ಯಮದಿಂದ ಬಂದಿದ್ದಾಗ್ಯೂ ನಿರಂತರ ಸಾಧನೆಯ ಮೂಲಕ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದು ಧಾರವಾಡವನ್ನು ಆಯ್ಕೆ ಮಾಡಿಕೊಂಡು ೩ನೇ ವರ್ಷದ ಬಿ.ಟೆಕ್ ನಲ್ಲಿ ಓದುತ್ತಿದ್ದಾನೆ.

ಪ್ರವೀಣ್ ಗೌಡ ಪಾಟೀಲ್

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಒಂದು ಹಳ್ಳಿಯ ಬಡರೈತ ಕುಟುಂಬದಿಂದ ಬಂದವ. ನವೋದಯ ಶಾಲೆಯ ಶಿಕ್ಷಣ ಮುಗಿಸಿ, ತಪಸ್ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಆಯ್ಕೆಯಾದ. ನಿರಂತರ ಪರಿಶ್ರಮದ ಮೂಲಕ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದು ಧಾರವಾಡವನ್ನು ಆಯ್ಕೆ ಮಾಡಿಕೊಂಡು ೩ನೇ ವರ್ಷದ ಬಿ.ಟೆಕ್ ನಲ್ಲಿ ಓದುತ್ತಿದ್ದಾನೆ.

ಆಂಜಿನಪ್ಪ

ಆನೇಕಲ್ ತಾಲೂಕಿನ ಒಂದು ಸಣ್ಣಗ್ರಾಮದಲ್ಲಿ ಕೂಲಿಕಾರ ಕುಟುಂಬದಲ್ಲಿ ಜನಿಸಿದನು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ. ತಾಯಿ ಕೂಲಿ ಕೆಲಸ ಮಾಡಿ ಅತ್ಯಂತ ಕಷ್ಟ ಪರಿಸ್ಥಿತಿಯಲ್ಲಿ ಸಂಸಾರ ಸಾಗಿಸುತ್ತಿದ್ದರು. ಆಂಜಿನಪ್ಪ ನವೋದಯದಲ್ಲಿ ವಿದ್ಯಾಭ್ಯಾಸ ಮುಗಿಸಿ ತಪಸ್ ಪ್ರಕಲ್ಪಕ್ಕೆ ಆಯ್ಕೆಯಾಗಿ ಬಂದನು. ಪ್ರಾರಂಭದಿಂದಲೂ ಶ್ರಮವಹಿಸಿ ಅಧ್ಯಯನ ಮಾಡಿ ಜೆಇಇ ಅಡ್ವಾನ್ಸ್ ನಲ್ಲಿ ಅತ್ಯುತ್ತಮ ರ‍್ಯಾಂಕ್ ಗಳಿಸಿ ಮುಂಬೈ ಐಐಟಿಯನ್ನು ಆಯ್ಕೆ ಮಾಡಿಕೊಂಡನು. ಇದೀಗ ಇಂಟಿಗ್ರೇಟೆಡ್ ಎಂ.ಟೆಕ್. ದ್ವಿತೀಯ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

ಪ್ರೇಮ್ ಕುಮಾರ್

ಬಾಗಲಕೋಟೆ ಜಿಲ್ಲೆ, ಬೀಳಗಿ ತಾಲೂಕಿನ ಒಂದು ಸಾಧಾರಣ ಹಳ್ಳಿಯ ರೈತನ ಮಗನಾಗಿ ಹುಟ್ಟಿದ ಪ್ರೇಮ್ ಕುಮಾರ್. ನವೋದಯ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ತಪಸ್ ಪ್ರಕಲ್ಪಕ್ಕೆ ಆಯ್ಕೆಯಾಗಿ ಬಂದನು. ಶಿಸ್ತುಬದ್ಧ ಅಧ್ಯಯನ ಮಾಡಿ ಜೆಇಇ ಅಡ್ವಾನ್ಸ್ ನಲ್ಲಿ ಅತ್ಯುತ್ತಮ ರ‍್ಯಾಂಕ್ ಗಳಿಸಿ ಮುಂಬೈ ಐಐಟಿಯನ್ನು ಆಯ್ಕೆ ಮಾಡಿಕೊಂಡನು. ಇದೀಗ ಇಂಟಿಗ್ರೇಟೆಡ್ಎಂ.ಟೆಕ್. ದ್ವಿತೀಯ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

ಶ್ರೀಧರ

ಮೂಲತಃ ಶಿರಸಿ ತಾಲೂಕಿನ ರೈತ ಕುಟುಂಬದಲ್ಲಿ ಜನಿಸಿದ. ತಂದೆಯನ್ನು ಕಳೆದುಕೊಂಡ ಇವನು ತಾಯಿಯೊಡನೆ ಬೆಂಗಳೂರಿನಲ್ಲಿ ವಾಸವಾಗಿದ್ದು, ಖಾಸಗಿ ಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿದ. ತಾಯಿ ಒಂದು ಸ್ವಯಂಸೇವಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಪಸ್ ಮೂಲಕ ಜೆಇಇ ಅಡ್ವಾನ್ಸ್ ನಲ್ಲಿ ಉತ್ತಮ ರ‍್ಯಾಂಕ್ ಪಡೆದು ಐಐಟಿ ಗೌಹಾತಿಯನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸುತ್ತಿದ್ದಾನೆ.

ಆಕಾಶ ಬಿ

ಮೂಲತಃ ಚಿಕ್ಕಮಗಳೂರಿನ ಕಡೂರು ತಾಲೂಕಿನ ಒಂದು ಪುಟ್ಟ ಹಳ್ಳಿ. ತಂದೆ ನಿಧನರಾಗಿದ್ದಾರೆ. ತಾಯಿ ಅಂಗಡಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನವೋದಯ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ತಪಸ್ ಪ್ರಕಲ್ಪಕ್ಕೆ ಆಯ್ಕೆಯಾಗಿ ಬಂದನು. ಕ್ರಮಬದ್ಧ, ನಿರಂತರ ಅಧ್ಯಯನ ಮಾಡಿ ಜೆಇಇ ಅಡ್ವಾನ್ಸ್ ನಲ್ಲಿ ರ‍್ಯಾಂಕ್ ಗಳಿಸಿದನು. ಈಗ ವಾರಣಾಸಿ ಐಐಟಿಯಲ್ಲಿ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಾನೆ.

ಚೇತನ್ ಎನ್

ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನವನು. ಹಳ್ಳಿ ಹಳ್ಳಿ ಸುತ್ತಿ ಬಳೆಗಳನ್ನು ಮಾರಾಟ ಮಾಡುವ ಉದ್ಯೋಗ ಅವರದು. ಸರ್ಕಾರಿ ಶಾಲೆಯಲ್ಲಿ ಪ್ರೌಢಶಾಲೆ ಶಿಕ್ಷಣ ಮುಗಿಸಿ ತಪಸ್ ಗೆ ಆಯ್ಕೆಯಾದ. ತಪಸ್ ನ ಮಾರ್ಗದರ್ಶನದಲ್ಲಿ ಜೆಇಇ ಅಡ್ವಾನ್ಸ್ ನಲ್ಲಿ ಉತ್ತಮ ರ‍್ಯಾಂಕ್ ಪಡೆದು ಇಂದೋರ್ ಐಐಟಿ ಗೆ ಪ್ರವೇಶ ಪಡದು ಈಗ ದ್ವಿತೀಯ ವರ್ಷದ ಬಿ.ಟೆಕ್ ಓದುತ್ತಿದ್ದಾನೆ.

ಬಸವರಾಜ್ ದಿಂಡೂರ್

ಮೂಲತಃ ಬಾಗಲಕೋಟೆ ಜಿಲ್ಲೆಯ ಸಾಧಾರಣ ರೈತ ಕೂಲಿ ಕಾರ್ಮಿಕ ಕುಟುಂಬಕ್ಕೆ ಸೇರಿದವನು. ನವೋದಯಲ್ಲಿ ಪ್ರೌಢಶಿಕ್ಷಣ ಮುಗಿಸಿ ತಪಸ್ ಗೆ ಆಯ್ಕೆಯಾಗಿ ಬಂದನು.ತಪಸ್ ನಲ್ಲಿನ ಶಿಕ್ಷಣ, ವಾತಾವರಣ ಹಾಗೂ ಮಾರ್ಗದರ್ಶನದಿಂದ ಜೆಇಇ ಅಡ್ವಾನ್ಸ್ ನಲ್ಲಿ ರ‍್ಯಾಂಕ್ ಪಡೆದ. ಈಗ ಧಾರವಾಡ ಐಐಟಿಯಲ್ಲಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದಾನೆ.

ವಿನಯ್ ಎಂ.ಹೆಚ್.

ಮೂಲತ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೂರದ ಸಣ್ಣ ಹಳ್ಳಿಯವ. ತಂದೆ ಕೃಷಿಕ. ಗ್ರಾಮದ ಪ್ರೌಢಶಾಲೆಯಲ್ಲೇ ಶಿಕ್ಷಣ ಮುಗಿಸಿ ತಪಸ್ ಗೆ ಆಯ್ಕೆಯಾಗಿ ಬಂದನು. ನಿರಂತರ ಶ್ರಮವಹಿಸಿ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ. ಚೆನ್ನೈ ಐಐಟಿಯಲ್ಲಿ ದ್ವಿತೀಯ ವರ್ಷದ ಬಿ.ಟೆಕ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

ರವಿಕಿರಣ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬಡ-ಬಡಿಗೇರ ಕುಟುಂಬಕ್ಕೆ ಸೇರಿದವನು. ಸ್ಥಾನೀಯ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿಸಿ ತಪಸ್ ಗೆ ಆಯ್ಕೆಯಾದ. ಶ್ರದ್ಧೆಯಿಂದ ಅಧ್ಯಯನ ಮುಗಿಸಿ ಜೆ.ಇ.ಇ.ಅಡ್ವಾನ್ಸ್ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ. ಈಗ ಧಾರವಾಡ ಐಐಟಿಯಲ್ಲಿ ಪ್ರವೇಶ ಸಿಕ್ಕಿದೆ.

ಕಾಂತರಾಜ್

ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗುಡ್ಡಗಾಡು ಪ್ರದೇಶದ ಅನಕ್ಷರಸ್ಥ ಬಡಕುಟುಂಬದಿಂದ ಬಂದವನು. ಮೊರಾರ್ಜಿ ಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿ ತಪಸ್ ಗೆ ಆಯ್ಕೆಯಾಗಿ ಬಂದ. ಅತ್ಯಂತ ಪರಿಶ್ರಮದಿಂದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದು ಇಂದೋರ್ ಐಐಟಿ ಆಯ್ಕೆಯಾಗಿದ್ದಾನೆ.

ವಿಕಾಸ್ ಪಿ.ಎಸ್.

ಮೂಲತಃ ಚಳ್ಳಕೆರೆ ತಾಲೂಕಿನ ಹಿಂದುಳಿದ ಗ್ರಾಮದ ಬಡರೈತ ಕುಟುಂಬದಲ್ಲಿ ಹುಟ್ಟಿ ಬಂದವ. ನವೋದಯ ಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿ ತಪಸ್ ಗೆ ಆಯ್ಕೆಯಾದ. ಪರಿಶ್ರಮ ಪಟ್ಟು ಓದಿ ಜೆ.ಇ.ಇ.ಅಡ್ವಾನ್ಸ್ ನಲ್ಲಿ ರ‍್ಯಾಂಕ್ ಗಳಿಸಿ ಐಐಟಿ ಖರಗ್ಪುರದಲ್ಲಿ ಪ್ರವೇಶ ಪಡೆದಿದ್ದಾನೆ.

ಸಂಪರ್ಕಿಸಿ

ಸಂಯೋಜಕರು
ರಾಷ್ಟ್ರೋತ್ಥಾನ ಪರಿಷತ್, ತಪಸ್ ವಿಭಾಗ
ಕೇಶವ ಶಿಲ್ಪ, ಕೆಂಪೇಗೌಡನಗರ,
ಉಮಾ ಟಾಕೀಸ್ ಹತ್ತಿರ
ಬೆಂಗಳೂರು - ೫೬೦೦೧೯

ದೂರವಾಣಿ: ೯೪೪೮೨೮೪೬೧೫, ೯೪೮೧೨೦೧೧೪೪

ಶೀಘ್ರ ಸಂಪರ್ಕ

ಸಂಬಂಧಿತ ಕೊಂಡಿಗಳು

ನಮ್ಮ ಪಾಲುದಾರರು

rashtrotthana
base
error: Content is protected !!