• ತಪಸ್ ಗೆ ಯಾರು ಅರ್ಹರು?

  ೯ನೇ ತರಗತಿಯಲ್ಲಿ ಕನಿಷ್ಠ ೮೦% ಅಂಕಗಳನ್ನು ಪಡೆದಿರುವ ಮತ್ತು ಕುಟುಂಬದ ವಾರ್ಷಿಕ ವರಮಾನ ರೂ.೧,೫೦,೦೦೦ ಕ್ಕಿಂತ ಕಡಿಮೆ ಹೊಂದಿರುವ ೧೦ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ (ಬಾಲಕರು) ವಿದ್ಯಾರ್ಥಿ ಈ ಕಾರ್ಯಕ್ರಮಕ್ಕೆ ಅರ್ಹತೆ ಹೊಂದಿದ್ದಾರೆ.

 • ಕಾರ್ಯಕ್ರಮಕ್ಕಾಗಿ ಶುಲ್ಕ ಎಷ್ಟು?

  ಈ ಕಾರ್ಯಕ್ರಮಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಶಿಕ್ಷಣ, ವಸತಿ ಮತ್ತು ಆಹಾರ ಸೇರಿದಂತೆ ಸಂಪೂರ್ಣ ಉಚಿತವಾಗಿರುತ್ತದೆ.

 • ಇದು ಹುಡುಗರಿಗೆ ಮಾತ್ರ ಏಕೆ ಲಭ್ಯವಿದೆ?

  ಹಲವು ವ್ಯವಸ್ಥೆಗಳ ದೃಷ್ಟಿಯಿಂದ ಹುಡುಗರಿಗಾಗಿ ಇದನ್ನು ರೂಪಿಸಲಾಗಿದೆ.


 • ಲಿಖಿತ ಪರೀಕ್ಷೆಯನ್ನು ಎಲ್ಲಿ ನಡೆಸಲಾಗುತ್ತದೆ?

  ಜಿಲ್ಲಾ ಮುಖ್ಯ ಕೇಂದ್ರಗಳು ಮತ್ತು ಕೆಲವು ಹೆಚ್ಚುವರಿ ಪಟ್ಟಣಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಸಂಪೂರ್ಣ ಪಟ್ಟಿಯು ಡಿಸೆಂಬರ್ ೨೦ ರಂದು ವೆಬ್ ಸೈಟ್ www.tapasedu.org ನಲ್ಲಿ ಲಭ್ಯವಿರುತ್ತದೆ.

 • ಲಿಖಿತ ಪರೀಕ್ಷೆಯ ಪಠ್ಯಕ್ರಮ ಯಾವುದು? ಯಾವ ವಿಷಯಗಳನ್ನು ಪರೀಕ್ಷಿಸಲಾಗುವುದು?

  ಲಿಖಿತ ಪರೀಕ್ಷೆಯ ಪಠ್ಯಕ್ರಮವು ವಿಜ್ಞಾನ (ಭೌತಶಾಸ್ತ್ರ, ರಸಾಯನಶಾಸ್ತ್ರ) ಮತ್ತು ಗಣಿತಶಾಸ್ತ್ರ
  ವಿಷಯಗಳಿಗೆ ಸಂಬಂಧಿಸಿರುತ್ತದೆ. ಮಾದರಿ ಪ್ರಶ್ನೆಪತ್ರಿಕೆಗಳು ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ.

 • ಲಿಖಿತ ಪರೀಕ್ಷೆಯ ಮಾದರಿ ಏನು?

  ಲಿಖಿತ ಪರೀಕ್ಷೆಯು ಬಹು ಆಯ್ಕೆ ಪ್ರಶ್ನೆಗಳನ್ನು ಹೊಂದಿರುತ್ತದೆ.

 • ಲಿಖಿತ ಪರೀಕ್ಷೆಯು ಕನ್ನಡದಲ್ಲಿದೆಯಾ?

  ಹೌದು, ಲಿಖಿತ ಪರೀಕ್ಷೆಯು ಕನ್ನಡ ಭಾಷೆಯಲ್ಲಿದೆ.

 • ತುಂಬಿದ ಅಪ್ಲಿಕೇಷನ್ ಫಾರ್ಮ್ ಅನ್ನು ಯಾರಿಗೆ ನಾವು ಸಲ್ಲಿಸಬೇಕು?

  ಭರ್ತಿ ಮಾಡಿದ ಅರ್ಜಿಯನ್ನು ನಿಮ್ಮ ಶಾಲೆಯ ಮುಖ್ಯೋಪಾಧ್ಯಾಯರ ಸಹಿಯೊಂದಿಗೆ ತಪಸ್ ಕೇಂದ್ರಕ್ಕೆ ಕಳುಹಿಸಬೇಕು.