ತಪಸ್ ಪ್ರಕಲ್ಪವು ರಾಷ್ಟ್ರೋತ್ಥಾನ ಪರಿಷತ್ ಮತ್ತು ಬೇಸ್ ನ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕರ್ನಾಟಕದ ಪ್ರಭಾವೀ ತರಬೇತಿ ಕಾರ್ಯಕ್ರಮವಾಗಿದೆ.

ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪದವಿ-ಪೂರ್ವ ಶಿಕ್ಷಣದೊಂದಿಗೆ ಐಐಟಿ ಪ್ರವೇಶಕ್ಕಾಗಿ ಅವರನ್ನು ತಯಾರಿಗೊಳಿಸುವ ಗುರಿಯನ್ನು ಹೊಂದಿದೆ. ಕರ್ನಾಟಕದಲ್ಲಿನ ಸುಮಾರು ೧೨,೦೦೦ ಕ್ಕಿಂತಲೂ ಹೆಚ್ಚಿನ ಪ್ರೌಢಶಾಲೆಗಳಿಂದ ವಿದ್ಯಾರ್ಥಿಗಳನ್ನು ಆಮಂತ್ರಿಸಿ, ಬಹು-ವಿಧದ ಕಠಿಣ ಪರೀಕ್ಷಾ ಪ್ರಕ್ರಿಯೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಪಿ.ಯು.ಶಿಕ್ಷಣ, ಐಐಟಿ ಪ್ರವೇಶ ಪರೀಕ್ಷೆಗೆ ತರಬೇತಿ, ಹಾಸ್ಟೆಲ್, ಆಹಾರ, ಪುಸ್ತಕಗಳು, ಸಮವಸ್ತ್ರ, ಇತ್ಯಾದಿ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.