ರಾಷ್ಟ್ರೋತ್ಥಾನ ಪರಿಷತ್:  ಜನ-ಸೇವಾ, ಜನ-ಶಿಕ್ಷಣ ಹಾಗೂ ಜನ-ಜಾಗೃತಿಯ ಮೂಲಕ ಸಮಾಜ ಪರಿವರ್ತನೆಯ ಉದ್ದೇಶದಿಂದ ೧೯೬೫ ರಲ್ಲಿ ರಾಷ್ಟ್ರೋತ್ಥಾನ ಪರಿಷತ್ ಅನ್ನು ಸ್ಥಾಪಿಸಲಾಯಿತು. ಕರ್ನಾಟಕ ರಾಜ್ಯಾದ್ಯಂತ ರಾಷ್ಟ್ರೋತ್ಥಾನ ಪರಿಷತ್ ವಿವಿಧ ಆಯಾಮಗಳಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದೆ.

 ರಾಷ್ಟ್ರೋತ್ಥಾನ ಸಾಹಿತ್ಯ: ಇತಿಹಾಸ, ಭಾರತೀಯ ಸಂಸ್ಕೃತಿ, ಸ್ವಾತಂತ್ರ್ಯ ಹೋರಾಟ, ವ್ಯಕ್ತಿತ್ವ ವಿಕಾಸ, ಯೋಗ ಮತ್ತು ಆರೋಗ್ಯ, ಮೌಲ್ಯಯುತ ಶಿಕ್ಷಣ, ನಮ್ಮ ದೇಶದ ಶ್ರೇಷ್ಠ ವ್ಯಕ್ತಿಗಳ ಜೀವನಚರಿತ್ರೆ ಮತ್ತು ರಾಷ್ಟ್ರೀಯ ದೃಷ್ಟಿಕೋನದ ವಿಷಯಗಳ ಬಗ್ಗೆ ರಾಷ್ಟ್ರೋತ್ಥಾನ ಸಾಹಿತ್ಯವು ಪುಸ್ತಕಗಳನ್ನು ಪ್ರಕಟಿಸುತ್ತಿದೆ.

ಸಮುದಾಯ ಸಬಲೀಕರಣ: ಸೇವಾ ಬಸ್ತಿ (ಸ್ಲಂ) ಗಳಲ್ಲಿ ಮಕ್ಕಳ ಮತ್ತು ಮಹಿಳೆಯರಿಗೆ ಶೈಕ್ಷಣಿಕ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಜಾಗರಣ ಪ್ರಕಲ್ಪದ ಮೂಲಕ ಹಾಗೂ ಅವಕಾಶ ವಂಚಿತ ಮಕ್ಕಳ ವಿಕಾಸದ ದೃಷ್ಟಿಯಿಂದ ಅನಾಥಾಶ್ರಮದಂತಹ ಚಟುವಟಿಕೆಗಳನ್ನು ನಂದಗೋಕುಲದ ಮೂಲಕ ನಡೆಸಲಾಗುತ್ತದೆ. ದೇಸಿ ಹಸುವಿನ ತಳಿಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಗೋಶಾಲಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.

ಆರೋಗ್ಯ ಸೌಲಭ್ಯ: ರಾಜ್ಯದ ಪ್ರತಿಷ್ಠಿತ ಹಾಗೂ ಶ್ರೇಷ್ಠ ಬ್ಲಡ್ ಬ್ಯಾಂಕ್ ಗಳಲ್ಲೊಂದು ಎಂದು ಹೆಸರು ಮಾಡಿರುವ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ (ರಕ್ತನಿಧಿ) ಹಾಗೂ ಥಲಸ್ಸೆಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುತ್ತಿರುವ ಸಂರಕ್ಷಾ ಪ್ರಕಲ್ಪ ರಾಷ್ಟ್ರೋತ್ಥಾನ ಪರಿಷತ್ ನ ಪ್ರಮುಖ ಚಟುವಟಿಕೆಗಳಾಗಿವೆ.

ಯೋಗ ಮತ್ತು ಫಿಟ್ನೆಸ್: ರಾಷ್ಟ್ರೋತ್ಥಾನ ಪರಿಷತ್ ಕಳೆದ ೪ ದಶಕಗಳಿಂದ ಯೋಗ ತರಬೇತಿಯನ್ನು ನೀಡುತ್ತಿದೆ. ಬೆಂಗಳೂರಿನಲ್ಲಿ ೭ ಕೇಂದ್ರಗಳನ್ನು ಹೊಂದಿದ್ದು, ಪ್ರತಿದಿನ ಸುಮಾರು ೩೦೦೦ ಕ್ಕಿಂತ ಹೆಚ್ಚು ಜನ ಯೋಗಾಭ್ಯಾಸ ತರಬೇತಿಯನ್ನು ಪಡೆಯುತ್ತಿದ್ದಾರೆ. ಯೋಗ ಹಾಗೂ ಫಿಟ್ನೆಸ್ ಕೇಂದ್ರಗಳು ಆಧುನಿಕ ವ್ಯಾಯಾಮ ಉಪಕರಣಗಳು ಮತ್ತು ರಾಷ್ಟ್ರೀಯ, ಅಂತರಾಷ್ಟ್ರೀಯ ಮಾನ್ಯತೆ ಪಡೆದ ತರಬೇತಿದಾರರನ್ನು ಹೊಂದಿವೆ.

ರಾಷ್ಟ್ರೋತ್ಥಾನ ಶಿಕ್ಷಣ ವಿಭಾಗ: ರಾಷ್ಟ್ರೋತ್ಥಾನ ಶಿಕ್ಷಣ ವಿಭಾದಲ್ಲಿ ರಾಜ್ಯಾದ್ಯಂತ ೬೦ ಕ್ಕೂ ಹೆಚ್ಚು ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿವೆ. ಶಿಶುಮಂದಿರಗಳು, ರಾಜ್ಯಪಠ್ಯಕ್ರಮ ಶಾಲೆಗಳು, ಸಿ.ಬಿ.ಎಸ್.ಇ. ಪಠ್ಯಕ್ರಮ ಶಾಲೆಗಳು, ವಸತಿ ನಿಲಯಗಳು, ಪಿ.ಯು.ಕಾಲೇಜು, ಹಾಗೂ ವಿಶೇಷ ಪ್ರಕಲ್ಪಗಳಾದ ತಪಸ್ ಹಾಗೂ ಸಾಧನಾ ಈ ವಿಭಾಗದಲ್ಲಿ ಸೇರಿವೆ.