ತಪಸ್ ವಿದ್ಯಾರ್ಥಿಗಳು ತಮಗೆ ದೊರೆತಿರುವ ಬೇಸ್ ಉಪನ್ಯಾಸಕ ವರ್ಗದವರ ಮಾರ್ಗದರ್ಶನದ ಉಪಯೋಗವನ್ನು ಉತ್ಸಾಹದಿಂದ ಪಡೆಯುತ್ತಿದ್ದಾರೆ. ಅವರು ವಿಷಯ ಶಿಕ್ಷಕರು ವಿಶೇಷ ಮಾರ್ಗದರ್ಶಕರು ಮತ್ತು ತಪಸ್ ಉಸ್ತುವಾರಿ ಶಿಕ್ಷಕರೊಂದಿಗೆ ಸೇರಿ ತಮ್ಮ ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಳ್ಳುತ್ತಾರೆ.

ವಸತಿನಿಲಯದ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಪ್ರತಿನಿತ್ಯದ ಕಾರ್ಯಗಳಲ್ಲಿ ಅಧ್ಯಯನ ಮತ್ತು ಸಂಸ್ಕಾರ ದೃಷ್ಟಿಯಿಂದ ಉತ್ತಮ ಸಹಾಯ ಒದಗಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಕಠಿಣ ನಿಯಮಗಳನ್ನು ಪಾಲಿಸಿ ತಮ್ಮ ಗುರಿಯನ್ನು ಸಾಕಾರಗೊಳಿಸಿಕೊಳ್ಳುತ್ತಾರೆ.